Tuesday, 22 November 2011

ನಾನು ಮುಖ್ಯಮಂತ್ರಿಯಾದರೆ...................

ನಾನು  ಈ ರಾಜ್ಯದ ಮುಖ್ಯಮಂತ್ರಿಯಾದರೆ,
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಮೊದಲ ಸಚಿವ ಸಂಪುಟದ ನಂತರ
ಪತ್ರಿಕಾಗೋಷ್ಠಿಯಲ್ಲಿ :
ಪತ್ರಿಕೆಗಳ / ದೃಶ್ಯ ಮಾಧ್ಯಮಗಳ  ಮೂಲಕ  ನೇರ ಪ್ರಸಾರದಲ್ಲಿ
ನಮ್ಮ ಕರ್ನಾಟಕ ರಾಜ್ಯದಲ್ಲಿ ಇಂದಿನಿಂದಲೇ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಜಾರಿ ಯಾಗಬೇಕು. ಹೊರರಾಜ್ಯಗಳ ಹೊರತುಪಡಿಸಿ, ಕರ್ನಾಟಕ ರಾಜ್ಯದ  ಎಲ್ಲಾ ವ್ಯವಹಾರಗಳು ಕಡತಗಳು, ಕನ್ನಡದಲ್ಲಿಯೇ ಇರಬೇಕು.

ಈ ಪತ್ರಿಕಾಗೋಷ್ಠಿಯ ಮೂಲಕ ನ ಮ್ಮ ಕರ್ನಾಟಕ ರಾಜ್ಯದಲ್ಲಿ ವಾಸ ಮಾಡುತ್ತಿರುವ ಕನ್ನಡೇತರರಿಗೆ ಒಂದು ಮನವಿ,
ನೀವು ಮನೆಯಲ್ಲಿ ಯಾವುದೇ ಭಾಷೆಯನ್ನು ಬಳಸಿಕೊಳ್ಳಿ. ನಿಮ್ಮ ತಾಯಿ ಭಾಷೆ ಎಷ್ಟು ಮುಖ್ಯವೋ, ನಿಮ್ಮನ್ನು ಬೆಳೆಸುತ್ತಿರುವ ಭಾಷೆಯೂ ಅಷ್ಟೇ ಮುಖ್ಯ ಕನ್ನಡವನ್ನು ಕಲಿಯಿರಿ, ಹೊರಗೆ ಸಾಧ್ಯವಾದಷ್ಟು ಕನ್ನಡದಲ್ಲೇ ಮಾತಾನಾಡಿ, ಕರ್ನಾಟಕ ರಾಜ್ಯದಲ್ಲಿ  ವಾಸ ಮಾಡುತ್ತಿರುವ ನೀವುಗಳು, ಇಲ್ಲಿನ  ಎಲ್ಲಾ ನಾಗರಿಕ ಸೌಲಭ್ಯಗಳ ಜೊತೆ ಕನ್ನಡದ ಮೇಲೆಯೂ ಅಭಿಮಾನ  ಇರಲಿ.
ಪ್ರತಿ ವರ್ಷ ನವೆಂಬರ್ 1ನೇ ತಾರೀಖಿನಂದು " ಕನ್ನಡರಾಜ್ಯೋತ್ಸವ" ದಿನದಂದು ಕನ್ನಡಿಗರು, ಕನ್ನಡೇತರರು ತಮ್ಮ ಮನೆಯಲ್ಲಿ "ಕನ್ನಡದ ದೀಪ" ಹಚ್ಚಿ, ಮನೆಯ ಮೇಲೆ ಸಣ್ಣದಾದ ಕನ್ನಡ ಧ್ವಜವನ್ನು ಹಾರಿಸಿ, ಕನ್ನಡ ಹಬ್ಬಕ್ಕೆ ಮೆರಗು ತನ್ನಿ ಇದು ಆಜ್ಞೆಯಲ್ಲ. ವಿನಂತಿ.

2) ನಮ್ಮ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಎಲ್ಲಾ ವರ್ಗದ  ಸರ್ಕಾರಿ ನೌಕರರಿಗೆ ಒಂದು ಮಾತು. 
ಇಷ್ಟು ದಿನ ನೀವು ಯಾವ ರೀತಿ ಕೆಲಸ ಮಾಡುತ್ತಿದ್ದಿರೋ, ಅದನ್ನು ಪ್ರಶ್ನೆ ಮಾಡುತ್ತಿಲ್ಲ.  
ಇಂದಿನಿಂದಲೇ, ನೀವು ಪಡೆಯುವ ಸಂಬಳಕ್ಕೆ ತಕ್ಕನಾಗಿ ಕೆಲಸ ಮಾಡಬೇಕು. ಲಂಚದ ಆಸೆಗೆ ಬಲಿಯಾಗಿ ನಿಮ್ಮ ಮೌಲ್ಯಗಳನ್ನು ಕಳೆದುಕೊಳ್ಳಬೇಡಿ. ನೀವು ಪಡೆಯುತ್ತಿರೋದು ಜನರು ಕಟ್ಟುತ್ತಿರುವ ತೆರಿಗೆ ಹಣದಿಂದ, ಅವರಿಗಾಗಿ ಕೆಲಸ ಮಾಡಿ,   ಎಲ್ಲಾ ಇಲಾಖೆಗಳು ಪಾರದರ್ಶಕವಾಗಿರಬೇಕು. 
ಒಬ್ಬ ಸಾಮಾನ್ಯ ಜನರಿಗೂ ನಿಮ್ಮ ಕೆಲಸಗಳು ತಲುಪಬೇಕು. ಮತ್ತೆ ನೀವುಗಳು ಲಂಚಕ್ಕೆ ಕೈಯೊಡ್ಡಿ  ಸಿಕ್ಕಿ ಬಿದ್ದರೆ, ಆಕ್ಷಣದಿಂದ ನಿಮ್ಮನ್ನು ಆ ಕೆಲಸದಿಂದ ವಜಾ ಮಾಡಿ, ಆ ಸ್ಥಾನಕ್ಕೆ ವಿದ್ಯಾವಂತ ನಿರುದ್ಯೋಗಿ ಯುವಕ/ಯುವತಿಯರನ್ನು ನೇಮಿಸಲಾಗುತ್ತದೆ. 
ಇದಕ್ಕಾಗಿ ಸ್ವಯಂಪ್ರೇರಿತರಾಗಿ ಭ್ರಷ್ಟಾಚಾರ ನಿರ್ಮೂಲನೆಗೆ ತೊಡಗಿಸಿಕೊಳ್ಳುವ ಪ್ರಾಮಾಣಿಕ ಹಿರಿಯ ನಾಗರಿಕರ ಕಾರ್ಯಪಡೆಯನ್ನು ರಚಿಸಲಾಗುವುದು. ಅವರು ನಿಮ್ಮನ್ನು ಗಮನಿಸುತ್ತಲೇ ಇರುತ್ತಾರೆ. ನಿಮ್ಮ ಮೇಲೆ ಜವಾಬ್ದಾರಿ ಹೆಚ್ಚಿರುತ್ತೆ ಅದನ್ನು ಅರಿತು ಕೆಲಸ ಮಾಡಿ, 

3) ಈ ಪತ್ರಿಕಾಗೋಷ್ಟಿಯ ಮೂಲಕ ನಮ್ಮ ಜನರಿಗೆ ನೇರವಾಗಿ ತಿಳಿಸುವುದು ಏನೆಂದರೆ 
ನಮ್ಮ ರಾಜ್ಯದ ಯಾವುದೇ ನಾಗರಿಕರು, ಯಾವುದೇ ಸರ್ಕಾರಿ ಇಲಾಖೆಗಳಿಂದ ಆಗಬಹುದಾದ ಕೆಲಸಗಳು ಆಗದೇ ಇದ್ದರೆ, ಯಾವುದೇ ಅಧಿಕಾರಿಯಿಂದ ನಿಮಗೆ ವಿನಾಕಾರಣ ತೊಂದರೆ ಉಂಟಾಗುತ್ತಿದ್ದರೆ. ನಿಮ್ಮ ಸಮಸ್ಯೆಗಳು ಯಾವುದೇ ಇಲಾಖೆಯಿಂದಾಗಿದ್ದರೂ ಸರಿಯೇ,  ಯಾವುದೇ ಸರ್ಕಾರಿ ನೌಕರ  ತಮ್ಮ ಕರ್ತವ್ಯ ಮಾಡದೇ ಲಂಚದ ಹಣಕ್ಕೆ ಕೈಯೊಡ್ಡುತ್ತಿರುವುದು ಕಂಡು ಬಂದರೆ, ತನ್ನ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಅನುಮಾನ ಇದ್ದರೆ, 50 ಪೈಸೆ  ಪೋಸ್ಟ್ ಕಾರ್ಡಿನಲ್ಲಿ "ಮುಖ್ಯಮಂತ್ರಿ ಕಛೇರಿಗೆ:" ನೇರವಾಗಿ ಬರೆದು ಕಳುಹಿಸಿ,  ಆಗಿರುವ, ಆಗುತ್ತಿರುವ   ತೊಂದರೆಗಳನ್ನು ನಿವಾರಿಸಲು ತಮ್ಮ ತಾಲ್ಲೂಕು ಕೇಂದ್ರಗಳಲ್ಲೇ ವಾಸ್ತ ಹೂಡಿ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತದೆ. ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಇದು ನಿಮ್ಮದೇ ರಾಜ್ಯ. ನಿಮ್ಮ ಹಕ್ಕುಗಳನ್ನು ನೀವು ಚಲಾಯಿಸಿ,

4) ಲೋಕಾಯುಕ್ತಕ್ಕೆ ಹೆಚ್ಚಿನ ಜವಾಬ್ದಾರಿ ಕೊಟ್ಟು ಭ್ರಷ್ಟರನ್ನು ಮಟ್ಟ ಹಾಕುವ ಒಂದೇ ಉದ್ದೇಶದಿಂದ ಸಂಪೂರ್ಣ ಅಧಿಕಾರ ಕೊಡಲಾಗುವುದು. ಇನ್ನು ಮುಂದೆ ನಮ್ಮ ರಾಜ್ಯದಲ್ಲಿ ಲಂಚಾವತಾರಕ್ಕೆ, ಭ್ರಷ್ಟಾಚಾರಕ್ಕೆ ಸ್ಥಾನವಿಲ್ಲದಂತೆ ಮಾಡೋದು ನಮ್ಮ ಮುಖ್ಯ ಗುರಿಯಾಗಿರುತ್ತೆ. 

ಇದು ನಾನು ಮುಖ್ಯಮಂತ್ರಿಯಾದ ನಂತರ ನಡೆದ ಮೊದಲ ಪತ್ರಿಕಾಗೋಷ್ಟಿಯ ವಿವರಗಳು

No comments:

Post a Comment